ಕನ್ನಡ ಸುರಭಿಗೆ ಸ್ವಾಗತ
![]() |
| ಮನೆಯ ಅಂಗಳದಲ್ಲಿ |
ಕನ್ನಡದ ಕಂದಮ್ಮಗಳಿಗೆ ಕನ್ನಡ ಕಬ್ಬಿಣದ ಕಡಲೆಯೇ?
ನೀವ್ ಏನೇ ಹೇಳಿ ಈಗಿನ ಮಕ್ಕಳಿಗೆ ಕನ್ನಡ ಮೀಡಿಯಂನಲ್ಲಿ ಕಲಿತ ಮಕ್ಕಳ ಹಾಗೆ ಕನ್ನಡ ಬರಲ್ಲ ಬಿಡ್ರೀ!.
ದಿನಾ ಕನ್ನಡ ದಿನಪತ್ರಿಕೆಗಳನ್ನು ಓದಬೇಕು, ತರಂಗ ಸುಧಾ ಮುಂತಾದ ವಾರಪತ್ರಿಕೆಗಳನ್ನು ತಿರುವಿ ಹಾಕಬೇಕು. ಆಗ ಬರುತ್ತೆ ಕನ್ನಡ. ಆದರೆ ಅದಕ್ಕೆಲ್ಲ ಎಲ್ಲಿದೆ ಪುರುಸೊತ್ತು? ಟೆಕ್ಸ್ಟ ಬುಕ್ ಓದೋದೇ ಒಂದು ಹರಸಾಹಸ. ಓದಿ ಒಪ್ಪಿಸಿ ಟೆಸ್ಟ್ ನಲ್ಲಿ ಬರೆದು ಬಂದರೆ ಆಯಿತು. ಮತ್ತೆ ಪುಸ್ತಕ ಮುಟ್ಟೋದು ಇನ್ನೊಂದು ಟೆಸ್ಟ್ ಬಂದಾಗಲೇ!
ಇನ್ನು ಇವರ ಟೆಸ್ಟ್ ಪೇಪರ್ ಕರೆಕ್ಷನ್ ಮಾಡೋ ಆ ಟೀಚರನ್ನ ದೇವರೇ ಕಾಪಾಡಬೇಕು. ಒತ್ತು ದೀಘ೯ ಒಂದೂ ಇರಬೇಕಾದ ಕಡೆ ಇರೋದಿಲ್ಲ. ಬೇಡದ ಕಡೆಯೆಲ್ಲಾ ಇರುತ್ತೆ. ಅವರೇ ಸ್ವಲ್ಪ ಅಡ್ಡಸ್ಟ್ ಮಾಡಿಕೊಂಡು ಮಾಕ್ಸ್೯ ಕೊಡಬೇಕಾಗುತ್ತೆ.
ಅದಿರಲಿ! ಕನ್ನಡ ಕಬ್ಬಿಣದ ಕಡಲೆ ಯಾಕಾಗಬೇಕು? ಸ್ವಲ್ಪ ಪ್ರಯತ್ನ ಪಟ್ಟರೆ ಹಸಿಕಡಲೆಯೋ ಅಥವಾ ನೆಂದ ಕಡಲೆಯೋ ಆಗಬಾರದೇಕೆ? ಬರೀ ಓದಿದರೆ ಸಾಲದು, ಕನ್ನಡಕ್ಕಾಗಿ , ಕನ್ನಡದಲ್ಲಿ ಚಿಂತಿಸುವ ಮನಸ್ಸುಗಳು ಬೇಕು.
ಹಾಗೆಂದು ಹಾರೈಸೋಣ
ಪೂರ್ಣಿಮಾ
